ಶ್ರೀ ಕ್ಷೇತ್ರದ ಇತಿಹಾಸ
ಸರಿ ಸುಮಾರು ೧೦೦ ವರ್ಷಗಳ ಹಿಂದಿನಿಂದ ಶ್ರೀ ರಂಗಯ್ಯನವರ ಪೂರ್ವಜರು ಕಳ್ಳಿಪಾಳ್ಯ, ಮಾದಿಗೊಂಡನಹಳ್ಳಿ ಗ್ರಾ ।। ಈಗಿನ ಭಕ್ತಮುನೇಶ್ವರ ನಗರದಲ್ಲಿ ವಾಸವಿರುವ ಕೃಷಿ ಕುಟುಂಬ. ಈ ಕುಟುಂಬ ಮಳೆಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದರು, ಇವರ ಆರಾಧ್ಯ ದೇವನಾದ ಶ್ರೀ ಭಕ್ತಮುನೇಶ್ವರನನ್ನು ೪-೫ ದಶಕಗಳಿಂದ ತಮ್ಮ ಕೃಷಿ ಜಮೀನಿನಲ್ಲಿ ಪೂಜಿಸುತ್ತಾ ಬಂದಿದ್ದಾರೆ.
ಸುಮಾರು ೨೦೦೦ ಸಾವಿರದ ಇಸವಿಯಲ್ಲಿ ಸ್ಥಳ ಬದಲಾವಣೆ ತೋರಿದ ಶ್ರೀ ಭಕ್ತಮುನೇಶ್ವರಸ್ವಾಮಿಯು, ದೈವರೂಪವನ್ನು ಅವತರಿಸಿ ಶ್ರೀಮತಿ ಮಾಲಮ್ಮ ಮತ್ತು ಶ್ರೀ ರಂಗಯ್ಯನವರ ಜ್ಯೇಷ್ಠ ಪುತ್ರರಾದ ರಂಗಸ್ವಾಮಿಯವರ ಮನದಲ್ಲಿ ದೈವ ಪ್ರೇರಣೆ ಅಂಕುರವಾಗಿತ್ತು ಅಚ್ಚರಿಯೆಂದರೆ ಒಂದೇ ರಾತ್ರಿಯಲ್ಲಿ ಒಂದು ಮೂಗು ಹುತ್ತ ೯ ಅಡಿ ಬೆಳೆದು ನಿಂತಿದ್ದು . ಪ್ರತಿ ಸೋಮವಾರ ಆ ಮೂಗು ಹುತ್ತಕ್ಕೆ ಗಂಧದ ಕಡ್ಡಿ ಹೊತ್ತಿಸಿ ಭಕ್ತಿಯಿಂದ ನಮಸ್ಕಾರವನ್ನು ಮಾಡಿ ಬರುತ್ತಿದ್ದರು.
ಕಾಲಕಳೆದಂತೆ ಮುನೇಶ್ವರನು ರಂಗಸ್ವಾಮಿಯವರ ಮೇಲೆ ಅನುಗ್ರಹವನ್ನು ತೋರಲು ಪ್ರಾರಂಭಿಸಿ ದೈವ ಪ್ರೇರಣೆಯಾಯಿತು. ಪೂಜೆ, ಪುನಸ್ಕಾರಗಳು ಸಾಗುತ್ತಲೇ ಬಂದವು, ಹಾಗೆ ಸುಮಾರು ೨ ದಶಕಗಳ ಹಿಂದೆ ಕುಟುಂಬದ ದೈವ ತನ್ನ ಪರಮಭಕ್ತನಾದ ಶ್ರೀ ರಂಗಸ್ವಾಮಿಯವರ ಕೃಪಾಶಿರ್ವಾಧದಿಂದ ಶ್ರೀ ಕ್ಷೇತ್ರ ಆರಂಭವಾಯಿತು.
ಯಾವುದೇ ವ್ಯಕ್ತಿಯು ೯ ಗಂಧದ ಕಡ್ಡಿ ಹಚ್ಚಿಕೊಂಡು ಆ ಮೂಗುತ್ತದ ಬಳಿ ಪೂಜೆಸಲ್ಲಿಸಿದರೆ ಕಷ್ಟಗಳು ಪರಿಹಾರವಾಗಲು ಶುರುವಾಯಿತು, ಈ ದಿವ್ಯ ದರ್ಶನ, ಅನುಗ್ರಹ ಬಾಯಿಯಿಂದ ಬಾಯಿಗೆ, ಕಿವಿಯಿಂದ ಕೇರಿಗೆ, ಕೇರಿಯಿಂದ ಕೇರಿಗೆ, ಊರಿನಿಂದ ಊರಿಗೆ ಹಬ್ಬಿತು. ಜನಸ್ತೋಮ ಈ ಕ್ಷೇತ್ರಕ್ಕೆ ಬರಲಾರಂಭಿಸಿದರು.